#Bengaluru bandh LIVE Updates: “ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತೆ ಮಾಡಿದೆ”: ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

Bengaluru bandh LIVE Updates: ಶಕ್ತಿಯೋಜನೆ ಬಳಿಕ ಸರ್ಕಾರದ ಜೊತೆ ಮುಸುಕಿನ ಗುದ್ದಾಟ ನಡೆಸ್ತಿದ್ದ ಖಾಸಗಿ ಸಾರಿಗೆ ಒಕ್ಕೂಟ, ಇದೀಗ ತಮ್ಮ ಬೇಡಿಕೆಗಳ ಈಡೇರಿಕೆಗೆ ಬಂದ್‌ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿವೆ. ಬೈಕ್‌ ಟ್ಯಾಕ್ಸಿ ನಿರ್ಬಂಧ, ಚಾಲಕರಿಗೆ ಸಹಾಯಧನ ಸೇರಿದಂತೆ ಸರ್ಕಾರದ ಮುಂದೆ ಹತ್ತು ಹಲವು ಬೇಡಿಕೆ ಇಟ್ಟಿದ್ದ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಇಂದು ಬೆಂಗಳೂರು ಬಂದ್‌’ಗೆ ಕರೆಕೊಟ್ಟಿವೆ. Bengaluru bandh LIVE Updates: ”ರಾಜ್ಯ ಸರಕಾರದ ಗ್ಯಾರಂಟಿಗಳ ‘ಅಡ್ಡ ಪರಿಣಾಮ’ದ ತೀವ್ರತೆ ಜನರಿಗೆ […]

#Banashankari temple: ಜೂ. 4ರಂದು ಬನಶಂಕರಿ ದೇವಿಗೆ ಕುಂಬಾಭೀಷೇಕ : ಜೂ 2 ಮತ್ತು 3 ದೇವಾಲಯ ಭಕ್ತಾದಿಗಳಿಗೆ ನಿರ್ಬಂಧ

ಬರುವ ಜೂನ್ ನಾಲ್ಕರಂದು ಶ್ರೀ ಬನಶಂಕರಿ ದೇವಿಗೆ ಶತಚಂಡಿಕಾಯಾಗ ಕುಂಬಾಭಿಷೇಕ ನಡೆಯುವುದರಿಂದ ಜೂನ್ 2ಮತ್ತು 3ರಂದು ಬನಶಂಕರಿ ದೇವಿಯ ದರ್ಶನ ಇರುವುದಿಲ್ಲ. ಭಕ್ತಾದಿಗಳು ಹಾಗು ಸಾರ್ವಜನಿಕರು ಸಹಕರಿಸಬೇಕೆಂದು ಶ್ರೀ ಬನಶಂಕರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮನವಿ ಮಾಡಿಕೊಂಡಿದೆ. ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಬನಶಂಕರಿ ದೇವಿಗೆ ದೇವಾಲಯದಲ್ಲಿ ಜೂನ್ 1 ರಿಂದ 4 ರ ವರೆಗೆ ಶತಚಂಡಿಕಾಯಾಗ ಹಾಗು ಮಹಾ ಪೂರ್ಣಾಹುತಿ ಮತ್ತು ಇತರೆ ಪೂಜಾ ಕಾರ್ಯಕ್ರಮಗಳು ನೆರವೇರುವುದರಿಂದ ಜೂನ್ 2 ಮತ್ತು 3 ರಂದು ದೇವಾಲಯಕ್ಕೆ ಸಾರ್ವಜನಿಕರ […]

#CMupdate ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ, ಮುಂದಿನ ಕ್ಯಾಬಿನೆಟ್‌ನಿಂದಲೇ ಜಾರಿ – ಸಿದ್ದರಾಮಯ್ಯ ಘೋಷಣೆ

ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ಗ್ಯಾರೆಂಟಿಗಳಿಗೆ ಮೊದಲ ಸಂಪುಟ ಸಭೆಯಲ್ಲೇ ತಾತ್ವಿಕ ಒಪ್ಪಿಗೆ ನೀಡಿದ ಸಿದ್ದರಾಮಯ್ಯ ಸರಕಾರ, ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ, ಮುಂದಿನ ಕ್ಯಾಬಿನೆಟ್‌ನಿಂದಲೇ ಯೋಜನೆಗಳು ಜಾರಿ ಎಂದು ಘೋಷಿಸಿದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ. ಯೋಜನೆಗಳ ಬಗ್ಗೆ ಚರ್ಚೆ ಮಾಡಿ, ಖರ್ಚು ವೆಚ್ಚಗಳನ್ನು ನೋಡಿಕೊಂಡು ಮುಂದಿನ ಸಂಪುಟ ಸಭೆಯಲ್ಲಿ ಅನುಷ್ಠಾನಕ್ಕೆ ಒಪ್ಪಿಗೆ ನೀಡುತ್ತೇವೆ ಎಂದು ಸಿಎಂ ಹೇಳಿದ್ದು, ಎಷ್ಟೇ ಖರ್ಚು ಆದರೂ ಗ್ಯಾರೆಂಟಿಗಳನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ. ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ಎಲ್ಲಾ […]

#CMKarnataka ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಿದ ಜೋಡೆತ್ತು: ಸಿದ್ದರಾಮಯ್ಯ 2.O

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪದಗ್ರಹಣ ಸಮಾರಂಭ ನಡೆದಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಭರ್ಜರಿ 135 ಬಹುಮತದೊಂದಿಗೆ ಸರ್ಕಾರ ರಚಿಸಿದ ಜೋಡೆತ್ತುಗಳು. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​. ರಾಜ್ಯದ  ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪದಗ್ರಹಣ ಸಮಾರಂಭ ನಡೆದಿದ್ದು, ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್ ಚಂದ್ […]

#H3N2 VIRUS UPDATE | ಎಚ್‌3ಎನ್‌2 ಸೋಂಕು ಅಪಾಯಕಾರಿಯಲ್ಲ!!! ರಾಜ್ಯದಲ್ಲಿ ಈವರಗೆ 26 ಪ್ರಕರಣಗಳು ವರದಿ ಆಗಿವೆ’ – ಆರೋಗ್ಯ ಸಚಿವ ಡಾ.ಕೆ. ಸುಧಾಕರ್!!

ಎಚ್‌3ಎನ್‌2 ಸೋಂಕು ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರ ಜೊತೆ ಸೋಮವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು,‌ ‘ಎಚ್‌3ಎನ್2 ಹಿನ್ನೆಲೆಯಲ್ಲಿ ಮಾರ್ಗಸೂಚಿ ಹೊರಡಿಸಲಾಗುವುದು. ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು‘ ಎಂದರು. ‘ಕೋವಿಡ್ ಮಾದರಿಯಲ್ಲಿ ಈ ಸೋಂಕಿನ ತಪಾಸಣೆ ನಡೆಸಲಾಗುತ್ತದೆ. ತಪಾಸಣೆಗೆ ಹೆಚ್ಚು ದರ ಪಡೆಯಲಾಗುತ್ತಿದೆ. ಇದನ್ನು ನಿಯಂತ್ರಿಸಲು ಸಮಿತಿ ರಚಿಸಲಾಗುವುದು. ಸಮಿತಿಯ ವರದಿ ಬಂದ ಬಳಿಕ ದರ ನಿಗದಿ ಮಾಡಲಾಗುತ್ತದೆ’ ಎಂದು ವಿವರಿಸಿದರು. ದೇಶದಲ್ಲಿ ಎಚ್‌3ಎನ್‌2 ಸೋಂಕು ಹೆಚ್ಚು ವರದಿಯಾಗುತ್ತಿರುವುದರಿಂದ ಜನರು […]

#Removal of Hanuman painting: ಜೆಟ್‌ ಮೇಲಿದ್ದ ಹನುಮಂತನ ಚಿತ್ರವನ್ನು ತೆಗೆದು ಹಾಕಿದ ಎಚ್‌ಎಎಲ್‌

ಬೆಂಗಳೂರು: ಏರೋ ಇಂಡಿಯಾ–2023ರ ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಎಚ್‌ಎಲ್‌ಎಫ್‌ಟಿ–42 ಜೆಟ್‌ ಮೇಲಿನ ಹನುಮಂತನ ಚಿತ್ರವನ್ನು ವಿವಾದಗಳ ಹಿನ್ನೆಲೆಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ತೆಗೆದುಹಾಕಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.  ಎಚ್‌ಎಲ್‌ಎಫ್‌ಟಿ–42 ಜೆಟ್‌ನ ಹಿಂಬದಿಯಲ್ಲಿ ಹನುಮಂತನ ಚಿತ್ರವನ್ನು ಅಂಟಿಸಲಾಗಿತ್ತು. ಜೆಟ್‌ ಮೇಲೆ ಹನುಮಂತನ ಚಿತ್ರ ಅಂಟಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿ ಕೇಂದ್ರ ಗಣಿ, ಕಲ್ಲಿದ್ದಲು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸೋಮವಾರ ಟ್ವೀಟ್ ಮಾಡಿದ್ದರು. ರಾಮ ದೂತ […]

#BBMP Administration : ಬಿಬಿಎಂಪಿ ಆಡಳಿತ ವಿಕೇಂದ್ರೀಕರಣಕ್ಕೆ ಶಿಫಾರಸು!!!

ಬೆಂಗಳೂರು: ಬಿಬಿಎಂಪಿ ಆಡಳಿತ ಸುಧಾರಿಸಲು ವಿಭಾಗೀಯ ಮಟ್ಟದಲ್ಲಿ 30 ಡೆಪ್ಯುಟಿ ಕಮಿಷನರ್‌ ಹುದ್ದೆ ಸೃಷ್ಟಿ ಸೇರಿ 700ಕ್ಕೂ ಹೆಚ್ಚು ಹುದ್ದೆಗಳನ್ನು ಸೃಜಿಸಿಕೊಳ್ಳಬಹುದು ಎಂದು ಬಿಬಿಎಂಪಿ 2ನೇ ಆಡಳಿತ ಸುಧಾರಣಾ ಆಯೋಗ ಅಭಿಪ್ರಾಯಪಟ್ಟಿದೆ. ಟಿ.ಎಂ.ವಿಜಯಭಾಸ್ಕರ್ ಅಧ್ಯಕ್ಷತೆಯ ಆಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಬಿಎಂಪಿ ಆಡಳಿತ ಸುಧಾರಣೆ ಕುರಿತ ವರದಿಯನ್ನು ಶುಕ್ರವಾರ ಸಲ್ಲಿಸಿತು. ಅಧಿಕಾರ ವಿಕೇಂದ್ರೀಕರಣ ಸಂಬಂಧ ಹಲವು ಶಿಫಾರಸುಗಳನ್ನು ಆಯೋಗ ಮಾಡಿದೆ. ನೇರ ನೇಮಕಾತಿಯಾಗುವ ಸಾಮಾನ್ಯ ವರ್ಗದ ಕೆಎಎಸ್‌ ಎ–ಗುಂಪಿನ ಕಿರಿಯ ವೇತನ ಶ್ರೇಣಿಯ ಅಧಿಕಾರಿಗಳ ಮಾದರಿಯಲ್ಲಿ […]

#Aero India | ಫೆ.13 ರಿಂದ ಏರ್‌ ಶೋ: ಟಿಕೆಟ್‌ ಖರೀದಿ ಜೋರು, ಸಾರ್ವಜನಿಕರ ಪಾಸ್‌ ಒಬ್ಬರಿಗೆ 2,500 ರೂಪಾಯಿ!!!

Bengaluru Air Show 2023: ದೇಶ, ವಿದೇಶಗಳ ವಿಮಾನಗಳು ಭರ್ಜರಿ ಪ್ರದರ್ಶನಕ್ಕಾಗಿ ತಾಲೀಮು ಆರಂಭಿಸಿದ್ದರೆ, ಸಮೀಪದಿಂದ ಅವುಗಳ ರೋಮಾಂಚನಕಾರಿ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಜನರು ಪಾಸ್ ಖರೀದಿ ನಡೆಸಿದ್ದಾರೆ. ಏರ್‌ ಶೋ ಮತ್ತು ಪ್ರದರ್ಶನದ ಪ್ರದೇಶಕ್ಕೆ ಮಾತ್ರ ಅವಕಾಶ ಕಲ್ಪಿಸುವ ಪಾಸ್‌ಗಳು ನಾಲ್ಕು ದಿನ ಲಭ್ಯವಿದ್ದರೆ, ಸಾಮಾನ್ಯ ಅಥವಾ ಸಾರ್ವಜನಿಕರ ಪಾಸ್‌ಗಳು ಎರಡು ದಿನಕ್ಕೆ ಮಾತ್ರ ಸಿಗುತ್ತವೆ. ವಾಣಿಜ್ಯ ಪಾಸ್‌ಗಳು ಹಾಗೂ ಕಂಪನಿಗಳು ಪ್ರತಿನಿಧಿಗಳು, ರಕ್ಷಣಾ ಇಲಾಖೆ ಸಿಬ್ಬಂದಿ ಭಾಗಿಯಾಗಲಿದ್ದಾರೆ. ಹೈಲೈಟ್ಸ್‌: ಬೆಂಗಳೂರು: ರಾಜಧಾನಿಯಲ್ಲಿ ನಡೆಯಲಿರುವ 14ನೇ ಆವೃತ್ತಿಯ […]

#Namma Clinic Official launch on Feb 7th in Namma Bengaluru: | ಬಿಬಿಎಂಪಿ ವ್ಯಾಪ್ತಿಯಲ್ಲಿ 108 ನಮ್ಮ ಕ್ಲಿನಿಕ್‌: ಫೆ.7ರಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ!!!

Namma Clinics in Bengaluru: ನಮ್ಮ ಕ್ಲಿನಿಕ್‌ಗಳು ವಾರದಲ್ಲಿ ಆರು ದಿನ ಬೆಳಿಗ್ಗೆ ಒಂಭತ್ತರಿಂದ ತೆರೆದಿರಲಿವೆ. ಒಬ್ಬ ವೈದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಾಲಯದ ಸಿಬ್ಬಂದಿ ಸೇರಿದಂತೆ ಆರೋಗ್ಯ ಸೇವೆ ಅಗತ್ಯವಿರುವ ಸಿಬ್ಬಂದಿ ಇರಲಿದ್ದಾರೆ. ಚುಚ್ಚುಮದ್ದು, ಗರ್ಭಿಣಿ, ನವಜಾತ ಶಿಶು ಆರೈಕೆ ಸೇರಿದಂತೆ ಹನ್ನೆರಡು ರೀತಿಯ ಚಿಕಿತ್ಸೆಗಗಳಿಗೆ ಈ ಕ್ಲಿನಿಕ್‌ಗಳಲ್ಲಿ ಅವಕಾಶವಿರಲಿದೆ. ಇದರೊಂದಿಗೆ ಸಣ್ಣ ಕಾಯಿಲೆಗಳಿಗೆ ಹೊರರೋಗಿಯಾಗಿ ಚಿಕಿತ್ಸೆ ಪಡೆಯಲು ಅವಕಾಶವಿರಲಿದೆ. ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿನ 108 ನಮ್ಮ ಕ್ಲಿನಿಕ್‌ಗಳಿಗೆ (Namma Clinic) ಫೆ.7ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ […]

#Airshow2023: ಬೆಂಗಳೂರಿನಲ್ಲಿ ನಡೆಯುವ ಏರ್-ಶೋ ನಲ್ಲಿ ಏರೋ ಇಂಡಿಯಾದ ‘ಎಲ್‌ಸಿಎ-ತೇಜಸ್’ ಪ್ರದರ್ಶನ

ಬೆಂಗಳೂರು: ಪೂರ್ಣ ಪ್ರಮಾಣದಲ್ಲಿ ಅಂತಿಮ ಕಾರ್ಯಾಚರಣೆ ಅನುಮತಿ (ಎಫ್‌ಒಸಿ) ಪಡೆದಿರುವ ‘ಎಲ್‌ಸಿಎ–ತೇಜಸ್‌’ ಯುದ್ಧ ವಿಮಾನವು ಏರೋ ಇಂಡಿಯಾದ ಭಾರತೀಯ ಪೆವಿಲಿಯನ್‌ನಲ್ಲಿ ಪ್ರದರ್ಶಿತವಾಗಲಿದೆ. ಫೆ.13ರಿಂದ 17ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾದ 14ನೇ ಆವೃತ್ತಿಯಲ್ಲಿ ‘ಏರ್‌–ಶೋ’ ಮತ್ತು ವೈಮಾನಿಕ ಕ್ಷೇತ್ರದ ಸಾಧನೆಗಳನ್ನು ಬಿಂಬಿಸಲಾಗುತ್ತಿದೆ. ಭಾರತದ ವೈಮಾನಿಕ ಕ್ಷೇತ್ರದ ಸಾಧನೆಗಳನ್ನು ಬಿಂಬಿಸಲು ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಉತ್ಪಾದಿಸುತ್ತಿರುವ ‘ಎಲ್‌ಸಿಎ-ತೇಜಸ್’ ಯುದ್ಧ ವಿಮಾನದ ವಿವಿಧ ರಚನಾತ್ಮಕ ಮಾದರಿಗಳು, ಸಿಮ್ಯುಲೇಟರ್‌ಗಳನ್ನು (ಎಲ್‌ಆರ್‌ಯು) ಪ್ರದರ್ಶಿಸಲಾಗುತ್ತಿದೆ. ಎಲ್‌ಸಿಎ ತೇಜಸ್ ಒಂದೇ ಎಂಜಿನ್ […]