#YASH19 ಗೋವಾದಲ್ಲಿ ಸದ್ದಿಲ್ಲದೇ ಶುರುವಾದ ಯಶ್‌ ಸಿನಿಮಾ ಶೂಟಿಂಗ್‌..! 60ರ ಕಾಲಘಟ್ಟದ ರಷ್ಯನ್‌ ಡ್ರಗ್ಸ್‌ ಮಾಫಿಯಾ ವಿರುದ್ಧ ಟಕ್ಕರ್‌

Rocking Star Yash : ಕೆಜಿಎಫ್‌ ಸಿನಿಮಾ ಸರಣಿಯ ಗೆಲುವಿನ ಬಳಿಕ ಯಶ್‌ ಮುಂದಿನ ಸಿನಿಮಾ ಬಗೆಗಿನ ಅಪ್‌ಡೇಟ್ಸ್‌ಗಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಇವರ ಮೇಲೆ ಸದ್ಯ ಇಡೀ ಭಾರತ ಕಣ್ಣಿಟ್ಟಿದೆ. ಸದ್ಯ ಇವರ ಸಿನಿಮಾ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.  ಹೌದು ಯಶ್‌ ಸಿನಿಮಾ ಶೂಟಿಂಗ್‌ ಸದ್ಯ ಗೋವಾದಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದು, ರಷ್ಯನ್‌ ಡ್ರಗ್ಸ್‌ ಮಾಫಿಯಾ ಜತೆಗೆ ಸೆಣಸಾಟದ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗುತ್ತಿದೆ. ಇನ್ನು ಈ ಸಿನಿಮಾಗೆ ನಿರ್ಮಾಣದಲ್ಲಿ ಸ್ವತಃ ಯಶ್‌ ಕೈಜೋಡಿಸಿದ್ದಾರೆ ಎನ್ನಲಾಗುತ್ತಿದೆ.  ಅಲ್ಲದೇ ಈ […]

#Jhanvi Kapoor entering south india film industry | ದಕ್ಷಿಣಕ್ಕೆ ಕಾಲಿಟ್ಟ ಜೂ.ಅತಿಲೋಕ ಸುಂದರಿ: ಅಮ್ಮನಂತೆ ಗೆಲ್ತಾಳಾ ಮಗಳು?

ಭಾರತೀಯ ಚಿತ್ರರಂಗದ ಅತಿಲೋಕ ಸುಂದರಿ ಶ್ರೀದೇವಿ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಶ್ರೀದೇವಿ ಸಿಕ್ಕ ಸಕ್ಸಸ್ ಮತ್ಯಾರಿಗೂ ಸಿಕ್ಕಂತಿಲ್ಲ. ಭಾರತೀಯ ಚಿತ್ರರಂಗ ಕಂಡ ಅಸಲಿ ಲೇಡಿ ಇವರೇನೇ. ಆದರೆ, ಶ್ರೀದೇವಿಯಂತೆ ಮಗಳಿಗೆ ಅಂತಹ ಸಕ್ಸಸ್ ಇನ್ನೂ ಸಿಕ್ಕಿಲ್ಲ. ಜಾಹ್ನವಿ ಕಪೂರ್ ಬಾಲಿವುಡ್‌ನಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕರಣ್‌ ಜೋಹರ್ ಅಂತಹ ಜನಪ್ರಿಯ ನಿರ್ಮಾಪಕ ಸಂಸ್ಥೆಯಿಂದ ಲಾಂಚ್ ಆಗಿದ್ದರೂ, ಜಾಹ್ನವಿ ಕಪೂರ್‌ಗೆ ಬ್ಲಾಕ್‌ಬಸ್ಟರ್ ಸಿನಿಮಾ ಕೊಡುವಲ್ಲಿ ಸೋತಿದ್ದಾರೆ. ಈ ಬೆನ್ನಲ್ಲೇ ದಕ್ಷಿಣ ಭಾರತಕ್ಕೆ ಅಧಿಕೃತವಾಗಿ ಎಂಟ್ರಿ […]

#Darshan express love about his Fans: ದರ್ಶನ್ ಎದೆ ಮೇಲೆ ಸೆಲೆಬ್ರೆಟೀಸ್ ಟ್ಯಾಟು!!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಅಭಿಮಾನಿಗಳ ನಡುವಿನ ಸಂಬಂಧವೇ ಬೇರೆ. ಅಭಿಮಾನ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮೇಲು. ಅದು ಈ ಹಿಂದೆನೂ ಅದೆಷ್ಟೋ ಸಂದರ್ಭಗಳಲ್ಲಿ ಗೊತ್ತಾಗಿದೆ. ತಮ್ಮ ನೆಚ್ಚಿನ ನಟ ದರ್ಶನ್‌ಗಾಗಿ ಅಭಿಮಾನಿಗಳು ಪ್ರಾಣ ಬೇಕಾದ್ರೂ ಕೊಡ್ತಾರೆ. ದರ್ಶನ್ ಅಂದ್ರೆ ಫ್ಯಾನ್ಸ್‌ಗೆ ಅಷ್ಟೊಂದು ಪ್ರೀತಿ ಅಭಿಮಾನ. ‘ಕ್ರಾಂತಿ’ ಸಿನಿಮಾ ವೇಳೆನೂ ದರ್ಶನ್‌ ಬೆಂಬಲಕ್ಕೆ ನಿಂತಿದ್ದರು. ಇದೇ ಕಾರಣಕ್ಕೆ ಅವರಿಗೆ ಗೌರವ ಸೂಚಿಸಲು ದರ್ಶನ್ ಟ್ಯಾಟು ಹಾಕಿಸಿಕೊಂಡಿದ್ದಾರೆ. ನನ್ನ ಪ್ರೀತಿಯ ಸೆಲೆಬ್ರಿಟೀಸ್’ ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ […]

#Kantara 1: ನೀವು ನೋಡಿರೋದು ‘ಕಾಂತಾರ’ ಪಾರ್ಟ್- 2.. ಪಾರ್ಟ್‌- 1 ಮುಂದೆ ಬರಲಿದೆ”: ರಿಷಬ್ ಶೆಟ್ಟಿ!!!

ನಿರ್ದೇಶಕ- ನಟ ರಿಷಬ್ ಶೆಟ್ಟಿ ಇದೇ ಮೊದಲ ಬಾರಿಗೆ ‘ಕಾಂತಾರ’ ಸಿನಿಮಾ ಮುಂದುವರೆದ ಭಾಗದ ಬಗ್ಗೆ ಮಾತನಾಡಿದ್ದಾರೆ. ‘ಕಾಂತಾರ’ ಸಿನಿಮಾ ಶತದಿನೋತ್ಸವ ಸಂಭ್ರಮದಲ್ಲಿ ರಿಷಬ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಾಮಾನ್ಯವಾಗಿ ಎರಡನೇ ಭಾಗ ಅಂದಾಗ ಕಥೆಯ ಮುಂದುವರೆದ ಭಾಗವನ್ನು ತೋರಿಸಲಾಗುತ್ತದೆ. ಆದರೆ ‘ಕಾಂತಾರ’ ವಿಚಾರದಲ್ಲಿ ಅದು ಉಲ್ಟಾ ಆಗ್ತಿದೆ. ಕಾಂತಾರ ಸೀಕ್ವೆಲ್ ಬದಲು ಈ ಬಾರಿ ಪ್ರೀಕ್ವೆಲ್ ಪ್ರೇಕ್ಷಕರ ಮುಂದೆ ಬರಲಿದೆ. ವಿನಯ ನಗರದ ಬಂಟರ ಸಂಘದ ಸಭಾಂಗಣದಲ್ಲಿ ‘ಕಾಂತಾರ’ ಚಿತ್ರದ ಶತದಿನೋತ್ಸವ ಸಂಭ್ರಮಾಚರಣೆಯಲ್ಲಿ ಇಡೀ ಚಿತ್ರತಂಡ […]

#KABZA inspiration from KGF: “ಕಬ್ಜ’ಗೆ ‘ಕೆ.ಜಿ.ಎಫ್‌’ ಪ್ರೇರಣೆ!!-ಆರ್.ಚಂದ್ರು

2023ರ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ಕಬ್ಜ’ ಸದ್ಯ ಬಿಡುಗಡೆಗೆ ಭರ್ಜರಿಯಾಗಿ ಸಜ್ಜಾಗುತ್ತಿದೆ. ಟೀಸರ್‌ ಬಳಿಕ ಚಿತ್ರದ ಮೊದಲ ಲಿರಿಕಲ್‌ ಹಾಡು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್‌ 17ರಂದು ಬಿಡುಗಡೆ ಆಗಲಿರುವ ಈ ಸಿನಿಮಾದ ಮೊದಲ ಹಾಡು ಫೆ.4ರಂದು ಹೊರಬರಲಿದೆ. ಸಿನಿಮಾ ಕುರಿತು ಮಾಹಿತಿ ನೀಡಿದ ನಿರ್ದೇಶಕ ಆರ್‌.ಚಂದ್ರು, ‘ಒಂಬತ್ತು ಭಾಷೆಗಳಲ್ಲಿ ‘ಕಬ್ಜ’ ತೆರೆಕಾಣಲಿದೆ. ನಿರ್ದೇಶಕನಾಗಿ ಜೊತೆಗೆ ನಿರ್ಮಾಪಕನಾಗಿಯೂ ಖುಷಿಯಾಗಿದ್ದೇನೆ. ಈಗಾಗಲೇ ಸಿನಿಮಾವನ್ನು ಅಮೆಜಾನ್‌ ಪ್ರೈಂ ಒಟಿಟಿ ವೇದಿಕೆಗೆ ಮಾರಾಟ ಮಾಡಿದ್ದೇನೆ. ಉಳಿದ ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ […]

#Opening Day Top 5 Highest Kannada Boxoffice collection List: ಬಿಡುಗಡೆ ದಿನದಂದು ಕರ್ನಾಟಕದಲ್ಲಿ ಅತಿಹೆಚ್ಚು ಗಳಿಸಿದ ಸಿನಿಮಾಗಳ ಪಟ್ಟಿ!!!

ಸಿನಿಮಾವೊಂದು ಬಿಡುಗಡೆಯಾಗಿ ಒಟ್ಟಾರೆ ಹಳೆಯ ಬಾಕ್ಸಾಫೀಸ್ ಕಲೆಕ್ಷನ್ ದಾಖಲೆಗಳನ್ನು ಮುರಿದರೆ ಆ ಚಿತ್ರವನ್ನು ಇಂಡಸ್ಟ್ರಿ ಹಿಟ್ ಎಂದೇ ಪರಿಗಣಿಸಲಾಗುತ್ತೆ. ಸಿನಿಮಾಗಳು ಬಿಡುಗಡೆಯಾದಾಗ ಆ ಚಿತ್ರದ ಓಪನಿಂಗ್ ಬಗ್ಗೆ ಹೆಚ್ಚು ಚರ್ಚೆಗಳು ಜರುಗುತ್ತವೆ. ಅದರಲ್ಲೂ ಸ್ಟಾರ್ ನಂತರ ಚಿತ್ರಗಳು ಬಿಡುಗಡೆಯಾದಾಗ ಮೊದಲ ದಿನದ ಗಳಿಕೆ ಎಷ್ಟು, ಈ ಹಿಂದಿನ ಹಿಟ್ ಸಿನಿಮಾಗಳ ದಾಖಲೆ ಮುರಿಯಿತಾ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಹಾಗಾದರೆ, ಬಿಡುಗಡೆ ದಿನ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಕಂಡ ಟಾಪ್ 5 ಸಿನಿಮಾಗಳು ಯಾವವು ಎಂಬ ಮಾಹಿತಿ ಇಲ್ಲಿದೆ. […]

#Kranti Movie Review: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ “ಕ್ರಾಂತಿ” ಸಿನಿಮಾ ಹೇಗಿದೆ ಗೊತ್ತಾ..?

Kranti Movie Review: ಕ್ರಾಂತಿ… ಯೆಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಿನಿಮಾ. ಫೈನಲಿ ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರಿದಿದೆ. 2021 ರಲ್ಲಿ ರಾಬರ್ಟ್ ಸಿನಿಮಾ ತೆರೆಕಂಡಿತ್ತು.ಅದಾದ ಬಳಿಕ ಡಿ ಬಾಸ್ ಫ್ಯಾನ್ಸ್ ಬಿಗ್ ಸ್ಕ್ರೀನ್ ಮೇಲೆ ಕರಿಯನನ್ನ ನೋಡಬೇಕು ಅಂತ ತುದಿಗಾಲಲ್ಲಿ ನಿಂತಿದ್ದರು. ಕ್ರಾಂತಿ ಸಿನಿಮಾ ಜನವರಿ 26ಕ್ಕೆ ರಿಲೀಸ್ ಆಗುತ್ತಿದೆ ಅನ್ನೋ ಮ್ಯಾಟರ್ ಕೇಳಿನೇ ಥ್ರಿಲ್ ಆಗಿದ್ದರು. ಕೊನೆಗೂ ಆ ದಿನ ಬಂದೇ ಬಿಟ್ಟಿದೆ. ಡಿ ಬಾಸ್ ನಟನೆಯ ಕ್ರಾಂತಿ ಕರುನಾಡಿನಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ. ಹೌದು, ಕ್ರಾಂತಿ […]

#PATHAAN BOXOFFICE COLLECTION : ಪಠಾಣ್‌ಗೆ ಭರ್ಜರಿ ಸ್ವಾಗತ: ಮೊದಲ ದಿನದ ಗಳಿಕೆ ಎಷ್ಟು??

ನವದೆಹಲಿ/ ಮುಂಬೈ: ಬಾಲಿವುಡ್‌ ಬಾದ್‌ಶಾ ಶಾರೂಕ್ ಖಾನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಸಿನಿಮಾ ಬುಧವಾರ 5000 ಚಿತ್ರಮಂದಿರಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ. ‌ಕೆಲವೆಡೆ ಪ್ರತಿಭಟನೆಗಳೂ ನಡೆದಿವೆ. ದೆಹಲಿ, ಮುಂಬೈನಂತಹ ಮಹಾನಗರಗಳಲ್ಲಿ ಬೆಳಿಗ್ಗೆ 6 ಮತ್ತು 7 ಗಂಟೆಯ ಪ್ರದರ್ಶನಗಳನ್ನು ಏರ್ಪಡಿಸಿದ್ದಲ್ಲದೇ, ಬುಧವಾರ ರಾತ್ರಿ 12.30ಕ್ಕೂ ಯಶ್‌ ರಾಜ್ ಫಿಲ್ಮ್ಸ್‌  ಪ್ರದರ್ಶನ ಏರ್ಪಡಿಸಿತ್ತು. ವಿಶ್ವದಾದ್ಯಂತ ಒಟ್ಟು 8,500 ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿರುವ ಪಠಾಣ್‌ಗೆ ಈ ಹಿಂದೆ ಯಾವ ಹಿಂದಿ ಸಿನಿಮಾಗೂ ಸಿಗದ ಭರ್ಜರಿ […]

#Bholaa teaser : ಭೋಲಾ ಟೀಸರ್‌ ರಿಲೀಸ್‌.. ಅಜಯ್‌ ಹೈ-ಫ್ಲೈಯಿಂಗ್ ಆಕ್ಷನ್‌ಗೆ ಪ್ರೇಕ್ಷಕ ಫಿದಾ..!

Ajay Devgan Bholaa teaser : ಬಾಲಿವುಡ್‌ ಸ್ಟಾರ್‌ ನಟ ಅಜಯ್ ದೇವಗನ್ ಅಭಿನಯದ ಭೋಲಾ ಚಿತ್ರ ಟೀಸರ್‌ ರಿಲೀಸ್‌ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕಾಲಿವುಡ್‌ ಬ್ಲಾಕ್ಬಸ್ಟರ್‌ ಸಿನಿಮಾ ʼಕೈಥಿʼಯ ಹಿಂದಿ ರಿಮೇಕ್ ಬೋಲಾ. ತಮಿಳು ಕೈಥಿಯಲ್ಲಿ ಕಾರ್ತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹಿಂದಿ ರಿಮೇಕ್‌ ಭೋಲಾದಲ್ಲಿ ಅಜಯ್ ಮಿಂಚಿದ್ದಾರೆ. ʼಹತ್ತು ವರ್ಷಗಳಲ್ಲಿ ತನ್ನ ಮಗಳಿಗೆ ಪ್ರೀತಿಯನ್ನು ನೀಡದ ತಂದೆ ಇದೀಗ ಒಂದು ರಾತ್ರಿಯಲ್ಲಿ ಜಗತ್ತಿಗೆ ಪ್ರೀತಿ ನೀಡಲು ಬಯಸಿದ್ದಾನೆʼ ಎಂದು ಅಜಯ್ ದೇವಗನ್ […]

#KCC Kiccha sudeepa: ʼಸ್ಯಾಂಡಲ್‌ವುಡ್‌ ನನ್ನ ಸ್ವತ್ತಲ್ಲʼ KCCಗೆ ಎಲ್ಲರಿಗೂ ಆಹ್ವಾನ ಇದೆ..!

ಕನ್ನಡ ಚಲಚನಚಿತ್ರ ಕಪ್‌ (KCC) ಕ್ರಿಕೆಟ್‌ ಟೂರ್ನ್ಮೆಂಟ್‌ ಶುರುವಾಗಲಿದೆ. ಇಷ್ಟು ದಿನ ಪರದೆ ಮೇಲೆ ಮ್ಯಾಜಿಕ್‌ ಮಾಡುತ್ತಿದ್ದ ಸಿನಿ ತಾರೆಯರು ಇದೀಗ ಬ್ಯಾಟ್‌ ಹಿಡಿದು ಗ್ರೌಂಡ್‌ನಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ. ಇನ್ನು ಕೆಸಿಸಿ ಕುರಿತು ಕಿಚ್ಚ ಸುದೀಪ್‌ ಮಾಹಿತಿ ನೀಡಿದ್ದು, ಈ ಭಾರಿಯ ಟೂರ್ನ್ಮೆಂಟ್‌ನಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ ಅಂತ ಹೇಳಿದ್ರು. ಈಗಾಗಲೇ ಕೆಸಿಸಿ ಎರಡೂ ಸೀಸನ್ ಯಶಸ್ವಿಯಾಗಿದದು, ಈಗ ಮೂರನೇ ಸೀಸನ್​ಗೆ ಚಾಲನೆ ನೀಡಲಾಗುತ್ತಿದೆ.  ಆರಂಭದಲ್ಲೇ ವಿಘ್ನ ಎನ್ನುವಂತೆ ಸಿನಿರಂಗದ ಕೆಲವರಿಗೆ ಸುದೀಪ್‌ ಕಡೆಯಿಂದ […]